ಗೋಲ್ಡ್ ಫಿಶ್‌ಗಿಂತ ಕಡಿಮೆ ಫೋಕಸ್‌? | Science Behind Mobile Addiction & Dopamine Detox


ನಮಸ್ಕಾರ ಸ್ನೇಹಿತರೆ.

ಇವತ್ತು ಒಂದು ಕಟುವಾದ ಸತ್ಯವನ್ನು ತಿಳಿಯೋಣ. ಇಂದಿನ ಮನುಷ್ಯನ ಹತ್ತಿರ ಇರುವ ಅತಿ ದೊಡ್ಡ ಆಸ್ತಿ ದುಡ್ಡು, ಚಿನ್ನ, ಜಮೀನು ಅಲ್ಲ. ಅದು ಗಮನ – ಫೋಕಸ್. ಆದರೆ ದುರಂತ ಅಂದ್ರೆ, ಇವತ್ತು ನಮ್ಮ ಈ ಫೋಕಸ್ ನಮ್ಮ ಕಂಟ್ರೋಲ್‌ನಲ್ಲೇ ಇಲ್ಲ.

ಇದನ್ನ ಯಾರು ಕದ್ದುಕೊಂಡು ಹೋಗ್ತಿದ್ದಾರೆ? ಅಕ್ಕಪಕ್ಕದ ದೇಶಗಳಾ? ನಮ್ಮ ಕಾಂಪಿಟಿಟರ್‌ಗಳಾ? ಇಲ್ಲ.
ನಮ್ಮ ಜೇಬಲ್ಲಿರುವ ಸ್ಮಾರ್ಟ್‌ಫೋನ್ ಮತ್ತು ಅದರಲ್ಲಿರುವ ಸೋಶಿಯಲ್ ಮೀಡಿಯಾ ಆ್ಯಪ್‌ಗಳು.

ವಿಜ್ಞಾನಿಗಳು ಹೇಳುವ ಪ್ರಕಾರ, ಒಂದು ಗೋಲ್ಡ್ ಫಿಶ್‌ನ ಅಟೆನ್ಶನ್ ಸ್ಪ್ಯಾನ್ ಸುಮಾರು 9 ಸೆಕೆಂಡ್. ಆದರೆ ಇಂದಿನ ಮಾಡರ್ನ್ ಮನುಷ್ಯನ ಸರಾಸರಿ ಅಟೆನ್ಶನ್ ಸ್ಪ್ಯಾನ್ ಕೇವಲ 8 ಸೆಕೆಂಡ್. ಅಂದರೆ ನಾವು ಒಂದು ವಿಚಾರದ ಮೇಲೆ ಮೀನಿಗಿಂತಲೂ ಕಡಿಮೆ ಸಮಯ ಗಮನ ಕೊಡ್ತಿದ್ದೇವೆ. ಇದು ಎಷ್ಟು ಡೇಂಜರಸ್ ಸಿಚುವೇಶನ್ ಅನ್ನೋದನ್ನು ಯೋಚನೆ ಮಾಡಿ.

ಐಎಎಸ್ ಆಗಬೇಕು, ಬಿಸಿನೆಸ್ ಕಟ್ಟಬೇಕು, ಎಕ್ಸಾಮ್‌ನಲ್ಲಿ ಟಾಪ್ ಬರಬೇಕು ಅನ್ನೋ ದೊಡ್ಡ ಕನಸುಗಳು ಇವೆ. ಆದರೆ ಓದೋಕೆ ಕುಳಿತರೆ ಐದು ನಿಮಿಷದಲ್ಲೇ ಮೊಬೈಲ್ ಕೈಗೆ ಬರುತ್ತೆ. ಗಂಟೆಗಟ್ಟಲೆ ರೀಲ್ಸ್ ನೋಡಿದ ಮೇಲೆ “ಇವತ್ತು ಟೈಮ್ ವೇಸ್ಟ್ ಆಯ್ತು” ಅನ್ನೋ ಗಿಲ್ಟ್ ಫೀಲಿಂಗ್ ಬರುತ್ತೆ.

ಇದಕ್ಕೆ ಕಾರಣ ನಾವು ಸೋಮಾರಿಗಳಾ? ನಮಗೆ ಬುದ್ಧಿ ಇಲ್ವಾ? ಖಂಡಿತ ಅಲ್ಲ. ಇಲ್ಲಿ ನಡೀತಿರೋದು ಒಂದು ಸೈಕಲಾಜಿಕಲ್ ವಾರ್.

Netflix, Instagram, ರೀಲ್ಸ್ ನೋಡೋಕೆ ನಮಗೆ ಯಾವತ್ತಾದ್ರೂ ಮೋಟಿವೇಷನ್ ಬೇಕಾ? ಬೇಡ. ಕೈ ತಾನಾಗಿಯೇ ಫೋನ್ ಕಡೆ ಹೋಗುತ್ತೆ. ಆದರೆ ಓದಬೇಕು, ಕೆಲಸ ಮಾಡಬೇಕು, ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅಂದ್ರೆ ಬೋರ್ ಅನ್ಸುತ್ತೆ. ಮೋಟಿವೇಷನ್ ಬೇಕಾಗುತ್ತೆ.

ಇದಕ್ಕೆ ಕಾರಣ ನಮ್ಮ ಮೆದುಳಲ್ಲಿ ಬಿಡುಗಡೆಯಾಗುವ ಒಂದು ಕೆಮಿಕಲ್ – ಡೋಪಮಿನ್. ಇದನ್ನ ಪ್ಲೆಷರ್ ಕೆಮಿಕಲ್ ಅಂತ ಕರೆಯಬಹುದು. ನಮ್ಮ ಬ್ರೈನ್‌ಗೆ ಯಾವಾಗಲೂ ಇನ್ಸ್ಟಂಟ್ ಗ್ರಾಟಿಫಿಕೇಶನ್ ಬೇಕು. ಒಂದು ರೀಲ್ ನೋಡಿದ್ರೆ ತಕ್ಷಣ ಖುಷಿ, ಡೋಪಮಿನ್ ರಿಲೀಸ್. ಮತ್ತೆ ಮತ್ತೊಂದು ರೀಲ್.

ಬ್ರೈನ್ ಸುಲಭವಾಗಿ ಸಿಗುವ ಡೋಪಮಿನ್‌ಗೆ ಅಡಿಕ್ಟ್ ಆಗಿಬಿಡುತ್ತೆ. ಆದರೆ ಓದೋದು, ಕೆಲಸ ಮಾಡೋದು ಹಾಗಲ್ಲ. ಅಲ್ಲಿ ರಿವಾರ್ಡ್ ತಕ್ಷಣ ಸಿಗೋದಿಲ್ಲ. ಎಕ್ಸಾಮ್ ರಿಸಲ್ಟ್ ವರ್ಷಕ್ಕೆ ಒಮ್ಮೆ, ಸಂಬಳ ತಿಂಗಳ ಕೊನೆಗೆ. ಈ ಕಾಯುವ ಪೇಷನ್ಸ್ ಡೋಪಮಿನ್ ಅಡಿಕ್ಟ್ ಆಗಿರೋ ಬ್ರೈನ್‌ಗೆ ಇರೋದಿಲ್ಲ.

ಹೀಗಾಗಿ ನಾವು ಹೈ ಡೋಪಮಿನ್ ಆಕ್ಟಿವಿಟೀಸ್ ಮತ್ತು ಲೋ ಡೋಪಮಿನ್ ಆಕ್ಟಿವಿಟೀಸ್ ಅಂತ ವಿಭಜನೆ ಮಾಡಬಹುದು.
ಸೋಶಿಯಲ್ ಮೀಡಿಯಾ, ವಿಡಿಯೋ ಗೇಮ್ಸ್, ಜಂಕ್ ಫುಡ್ – ಇವೆಲ್ಲ ಹೈ ಡೋಪಮಿನ್.
ಓದು, ಎಕ್ಸರ್ಸೈಸ್, ಕರಿಯರ್ ಬಿಲ್ಡಿಂಗ್ – ಇವೆಲ್ಲ ಲೋ ಡೋಪಮಿನ್.

ಒಮ್ಮೆ ಬ್ರೈನ್ ಹೈ ಡೋಪಮಿನ್ ರುಚಿಗೆ ಅಡಿಕ್ಟ್ ಆದಮೇಲೆ, ಓದೋದು ಕಹಿ ಮಾತ್ರೆ ನುಂಗಿದ ಹಾಗೆ ಅನ್ಸುತ್ತೆ.
ಇದಕ್ಕೆ ಪರಿಹಾರ ಇದೆ – ಡೋಪಮಿನ್ ಡಿಟಾಕ್ಸ್.

ಮೊದಲನೇ ಕಾರಣ ನಮ್ಮ ಫೋಕಸ್ ಹಾಳಾಗೋದಕ್ಕೆ – ವಾತಾವರಣ.
ಆಲ್ಕೋಹಾಲ್ ಅಡಿಕ್ಟ್ ಒಬ್ಬನು ಬಾರ್ ಪಕ್ಕ ಮನೆ ಮಾಡಿದ್ರೆ ಕುಡಿಯೋದನ್ನ ಬಿಡೋಕೆ ಆಗುತ್ತಾ? ಇಲ್ಲ.
ಅದೇ ರೀತಿ ನಿಮ್ಮ ಟೇಬಲ್ ಮೇಲೆ ಮೊಬೈಲ್ ಇಟ್ಕೊಂಡು “ನಾನು ಡಿಸ್ಟ್ರಾಕ್ಟ್ ಆಗಲ್ಲ” ಅಂದ್ರೆ ಅದು ನಿಮ್ಮನ್ನ ನೀವೇ ಮೋಸ ಮಾಡ್ಕೊಂಡಂತೆ.

ರಿಸರ್ಚ್ ಹೇಳುತ್ತೆ – ಫೋನ್ ಸ್ವಿಚ್ ಆಫ್ ಆಗಿದ್ರೂ ಅದು ಕಣ್ಣಿಗೆ ಕಾಣಿಸ್ತಾ ಇದ್ರೆ, ಬ್ರೈನ್‌ನ 20% ಸಾಮರ್ಥ್ಯ ಅದೇ ಕಡೆ ಹೋಗಿಬಿಡುತ್ತೆ.
ಆದ್ರೆ ರೂಲ್ ನಂಬರ್ ವನ್ – Out of sight, out of mind.
ಓದೋಕೆ ಅಥವಾ ಕೆಲಸಕ್ಕೆ ಕುಳಿತಾಗ ಫೋನ್‌ನ್ನು ಸೈಲೆಂಟ್ ಮಾಡಿ ಬೇರೆ ರೂಮ್‌ನಲ್ಲಿ ಇಡಿ, ಅಥವಾ ಕನಿಷ್ಠ ಡ್ರಾಯರ್ ಒಳಗೆ ಹಾಕಿ.

ಇನ್ನೊಂದು ಸೈಕಲಾಜಿಕಲ್ ಟ್ರಿಕ್ – 20 ಸೆಕೆಂಡ್ ರೂಲ್.
ಮನುಷ್ಯನ ಬ್ರೈನ್ ಮೂಲತಃ ಸೋಮಾರಿ. ಯಾವುದು ಸುಲಭವೋ ಅದನ್ನೇ ಮಾಡುತ್ತೆ.
ಒಳ್ಳೆ ಅಭ್ಯಾಸ ಮಾಡೋಕೆ 20 ಸೆಕೆಂಡ್‌ಗಿಂತ ಜಾಸ್ತಿ ಎಫರ್ಟ್ ಬೇಕಾದ್ರೆ, ಬ್ರೈನ್ ಅದನ್ನ ತಪ್ಪಿಸಿಕೊಳ್ಳುತ್ತೆ.

ಅದಕ್ಕೆ ಪರಿಹಾರ –
Bad habits ಗೆ friction ಹೆಚ್ಚಿಸಬೇಕು, good habits ಗೆ friction ಕಡಿಮೆ ಮಾಡಬೇಕು.
ಬೆಳಿಗ್ಗೆ ಓದಬೇಕು ಅಂದ್ರೆ, ರಾತ್ರಿ ನಿದ್ರೆಗೆ ಹೋಗೋ ಮೊದಲು ಬುಕ್ ಓಪನ್ ಮಾಡಿ ಟೇಬಲ್ ಮೇಲೆ ಇಡಿ.
ಫೋನ್ ಮಾತ್ರ ದೂರ ಇರಲಿ.

ಮುಂದಿನದು – Five Minute Rule.
“ಇವತ್ತು ಪೂರ್ತಿ ಓದಲ್ಲ, ಜಸ್ಟ್ ಐದು ನಿಮಿಷ ಓದ್ತೀನಿ” ಅಂತ ನಿಮ್ಮ ಮೆದುಳಿಗೆ ಸುಳ್ಳು ಹೇಳಿ.
ಒಮ್ಮೆ ಶುರು ಮಾಡಿದ್ರೆ, ಬ್ರೈನ್ ಕೆಲಸವನ್ನ ಅರ್ಧಕ್ಕೆ ಬಿಡೋಕೆ ಇಷ್ಟಪಡುವುದಿಲ್ಲ.
ಐದು ನಿಮಿಷ 30–50 ನಿಮಿಷ ಆಗಿರುತ್ತೆ ಗೊತ್ತೇ ಆಗಲ್ಲ.

ಇದನ್ನ Zeigarnik Effect ಅಂತ ಕರೆಯುತ್ತಾರೆ.
ಕಷ್ಟ ಇರೋದು ಸ್ಟಾರ್ಟಿಂಗ್ ಮಾತ್ರ. ಗಾಡಿ ಒಮ್ಮೆ ಸ್ಟಾರ್ಟ್ ಆದ್ರೆ ಮೂವ್ ಆಗುತ್ತೆ.

ಮುಂದಿನದು – Pomodoro Technique.
25 ನಿಮಿಷ ಫುಲ್ ಫೋಕಸ್.
ಆ ಸಮಯದಲ್ಲಿ ಫೋನ್, ಮಾತು, ಡಿಸ್ಟ್ರಾಕ್ಷನ್ ಏನೂ ಬೇಡ.
ಅದಾದ ಮೇಲೆ 5 ನಿಮಿಷ ಬ್ರೇಕ್ – ಮೊಬೈಲ್ ಅಲ್ಲ, ಎದ್ದು ನಡೆದಾಡಿ, ನೀರು ಕುಡಿಯಿ.
ನಾಲ್ಕು ಸೈಕಲ್ ಆದಮೇಲೆ ಲಾಂಗ್ ಬ್ರೇಕ್.
ಇದರಿಂದ ಫೋಕಸ್ ಹೆಚ್ಚಾಗುತ್ತೆ, ಸುಸ್ತಾಗಲ್ಲ.

ನೆಕ್ಸ್ಟ್ ಲೆವೆಲ್ – Deep Work.
ಮಲ್ಟಿ ಟಾಸ್ಕಿಂಗ್ ಅನ್ನೋದು ಒಂದು ಮಿಥ್.
ಒಂದೇ ಸಮಯದಲ್ಲಿ ಹಲವಾರು ಕೆಲಸ ಮಾಡಿದ್ರೆ, ಕೆಲಸದ ಗುಣಮಟ್ಟ ಮತ್ತು ಐಕ್ಯೂ ಎರಡೂ ಕಡಿಮೆಯಾಗುತ್ತವೆ.

ದಿನಕ್ಕೆ ಕನಿಷ್ಠ ಎರಡು ಗಂಟೆ Monk Mode.
ಆ ಸಮಯದಲ್ಲಿ ಫೋನ್ ಇಲ್ಲ, ಇಂಟರ್ನೆಟ್ ಇಲ್ಲ, ಮಾತುಕತೆ ಇಲ್ಲ.
ನೀವು ಮತ್ತು ನಿಮ್ಮ ಕೆಲಸ ಅಷ್ಟೇ.
ಡಿಸ್ಟ್ರಾಕ್ಷನ್ ಇಲ್ಲದೆ ಆಳವಾಗಿ ಯೋಚಿಸಿದಾಗಲೇ ಗ್ರೇಟ್ ಐಡಿಯಾಗಳು ಬರುತ್ತವೆ.

ಕೊನೆಗೆ – ದೇಹವೇ ದೇವಾಲಯ.
ನಿದ್ರೆ: 7–8 ಗಂಟೆ ಕ್ವಾಲಿಟಿ ನಿದ್ರೆ ಬೇಕು.
ನೀರು: ಮೆದುಳಿನ 75% ನೀರು – ಡಿಹೈಡ್ರೇಷನ್ ಫೋಕಸ್ ಕಡಿಮೆ ಮಾಡುತ್ತೆ.
ಆಹಾರ: ತುಂಬಾ ಭಾರಿಯಾದ, ಹೈ ಶುಗರ್ ಫುಡ್ ಓದುವಾಗ ಅವಾಯ್ಡ್ ಮಾಡಿ.

ನಾವು ಬದುಕುತ್ತಿರುವುದು Attention Economy ಯಲ್ಲಿ.
ದೊಡ್ಡ ಕಂಪನಿಗಳು ನಿಮ್ಮ ಗಮನ ಸೆಳೆಯೋಕೆ ಕೋಟಿ ಕೋಟಿ ಖರ್ಚು ಮಾಡ್ತಿವೆ.
ಭವಿಷ್ಯದಲ್ಲಿ ಎರಡು ತರದ ಜನ ಮಾತ್ರ ಇರ್ತಾರೆ –
ಒಬ್ಬರು ಕಂಟೆಂಟ್ ಕನ್‌ಸ್ಯೂಮ್ ಮಾಡೋವರು,
ಮತ್ತೊಬ್ಬರು ಫೋಕಸ್ ಕಂಟ್ರೋಲ್ ಮಾಡಿ ಹೊಸದನ್ನು ಸೃಷ್ಟಿ ಮಾಡೋವರು.

ನೀವು ಯಾವ ಗುಂಪಿನಲ್ಲಿ ಇರಬೇಕು ಅನ್ನೋದು ನಿಮ್ಮ ಕೈಯಲ್ಲಿದೆ.
ಫೋಕಸ್ ಇಸ್ ದ ಕೀ ಟು ಎವ್ರಿಥಿಂಗ್.

Post a Comment

Previous Post Next Post