"ಸೋಶಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಕಾಮೆಂಟ್‌ಗೆ ಜೈಲು–ದಂಡ: ಹೊಸ ಮಸೂದೆ ವಿವರ"


ನಮಸ್ಕಾರ ಸ್ನೇಹಿತರೆ, ರಾಜ್ಯದಲ್ಲಿ ಸೋಶಿಯಲ್ ಮೀಡಿಯಾ ವಿಚಾರದಲ್ಲಿ ಹೊಸದಾಗಿ ಕಠಿಣ ನಿಯಮಗಳು ಬರಲಿವೆ. ಮುಂದೆ ಯಾರೇ ಬೇಕಾಬಿಟ್ಟಿ ಕಾಮೆಂಟ್ ಮಾಡಿದ್ರೂ, ವಿಶೇಷವಾಗಿ ಧರ್ಮ, ಜಾತಿ, ಭಾಷೆ, ಜನಾಂಗ ಸಂಬಂಧಿತ ಕೆಟ್ಟ ಹೇಳಿಕೆಗಳನ್ನ ಹಾಕಿದ್ರೆ ಹೆವಿ ದಂಡ ಮತ್ತು ಜೈಲು ಶಿಕ್ಷೆಯಷ್ಟೇ.
ರಾಜ್ಯ ಸರ್ಕಾರ ಇದೀಗ ಕರ್ನಾಟಕ ಹೇಟ್ ಸ್ಪೀಚ್ ಅಂಡ್ ಹೇಟ್ ಕ್ರೈಮ್ಸ್ ಪ್ರಿವೆನ್ಷನ್ ಆಕ್ಟ್ 2025 ಮಸೂದೆಯನ್ನು ತರಲು ಮುಂದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ವೈಯಕ್ತಿಕ ನಿಂದನೆ ಮತ್ತು ದ್ವೇಷ ಭಾಷಣವನ್ನು ತಡೆಗಟ್ಟೋದು ಇದರ ಮುಖ್ಯ ಉದ್ದೇಶ.

🔹 ಈ ಕಾನೂನಿನ ಫೋಕುಸ್ ಏನು?


ದ್ವೇಷ ಅಪರಾಧ (Hate Crime)
ದ್ವೇಷ ಭಾಷಣ (Hate Speech)

ಯಾರಾದ್ರೂ ಧರ್ಮ, ಜಾತಿ, ಲಿಂಗ, ಭಾಷೆ, ಜನಾಂಗ, ಅಂಗವೈಕಲ್ಯ, ಬುಡಕಟ್ಟು ಇತ್ಯಾದಿಗಳನ್ನ ಟಾರ್ಗೆಟ್ ಮಾಡಿ


ಹಾನಿ ಮಾಡೋದ್ರೇ
ಪ್ರಚೋದನೆ ಮಾಡೋದ್ರೇ
ಅಥವಾ ದ್ವೇಷ ಹರಡೋದ್ರೇ
ಅದು ದ್ವೇಷ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಒಬ್ಬ ವ್ಯಕ್ತಿ ಅಥವಾ ಗುಂಪಿಗೆ ಉದ್ದೇಶಪೂರ್ವಕವಾಗಿ ಹಾನಿ ತರೋ ಮಾತು, ಪಬ್ಲಿಕೇಶನ್, ಪೋಸ್ಟ್, ಭಾಷಣ—all are considered hate speech.
🔹 ಶಿಕ್ಷೆ ಎಷ್ಟು?

ದ್ವೇಷ ಅಪರಾಧಕ್ಕೂ, ದ್ವೇಷ ಭಾಷಣಕ್ಕೂ:


1 ರಿಂದ 3 ವರ್ಷಗಳ ಜೈಲು
₹5000 ದಂಡಕೆಲ ಸಂದರ್ಭಗಳಲ್ಲಿ ಬೇಲ್ ಕೂಡ ಕಷ್ಟ
🔹ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯೇ?”
ಸಂವಿಧಾನದ ಆರ್ಟಿಕಲ್ 19(1) ವಾಕ್ ಸ್ವಾತಂತ್ರ್ಯ ಕೊಡುತ್ತೆ. ಆದರೆ ಅದು ಪೂರ್ಣ ಸ್ವಾತಂತ್ರ್ಯ ಅಲ್ಲ.
ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಭಾರತದ ಭದ್ರತೆ ಇವಕ್ಕೆ ಧಕ್ಕೆ ತರೋ ಮಾತುಗಳಿಗೆ ಸರ್ಕಾರ ನಿರ್ಬಂಧ ಹಾಕಬಹುದಾಗಿದೆ.
ಸುಪ್ರೀಂ ಕೋರ್ಟ್ ಕೂಡ “ವಾಕ್ ಸ್ವಾತಂತ್ರ್ಯಕ್ಕೆ ಮಿತಿ ಇರಬೇಕು” ಎಂದು ಹಲವು ಬಾರಿ ಹೇಳಿದೆ.
🔹 ವಿರೋಧ ಪಕ್ಷಗಳ ಅಭಿಪ್ರಾಯ
ಬಿಜೆಪಿ ಹೇಳೋದೇನೆಂದರೆ—
ಸಾಮಾನ್ಯ ಟೀಕೆಗಳನ್ನೂ ದ್ವೇಷ ಭಾಷಣ ಅಂತ ಮಾಡಿ ಆಕ್ಷನ್ ತಗೊಳ್ಳುವ ಸಾಧ್ಯತೆ ಇದೆ.”
🔹 ಸರ್ಕಾರದ ಪ್ರತಿಕ್ರಿಯೆ
ಗೃಹ ಸಚಿವ ಪರಮೇಶ್ವರ್ ಹೇಳಿರುವುದು:
ಯಾರನ್ನೂ ಟಾರ್ಗೆಟ್ ಮಾಡೋ ಉದ್ದೇಶ ಇಲ್ಲ. ಸರ್ಕಾರ ಬದಲಾದರೂ ಕಾಯ್ದೆ ಅದೇ ಇರುತ್ತದೆ.”
🔹 ಏಕೆ ಈ ಕಾನೂನು ಅಗತ್ಯ?
ಕಳೆದ ಎರಡು–ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಕೋಮು ಘರ್ಷಣೆ, ದ್ವೇಷ ಭಾಷಣ, ಮತ್ತು ಸಾಮಾಜಿಕ ಒತ್ತಡಗಳು ಹೆಚ್ಚಾಗಿವೆ.
ಇದನ್ನ ನಿಯಂತ್ರಿಸಲು ಈ ಮಸೂದೆ ಮುಖ್ಯ ಅಂತ ಸರ್ಕಾರ ಹೇಳ್ತಾ ಇದೆ.
 ಒಟ್ಟಾರೆ
ಈ ಕಾನೂನು ಜಾರಿಗೆ ಬಂದ್ಮೇಲೆ
ಸೋಶಿಯಲ್ ಮೀಡಿಯಾದಲ್ಲಿ ತೋಪು ಬಾಯಿ ಹಾಕ್ತಿರೋವರಿಗೆ ಈಗ ಬ್ರೇಕ್ ಬೀಳಬಹುದು.
ಯಾರೇ ಆಗಿರಲಿ—ಅಪಾಯಕಾರಿ, ದ್ವೇಷ ಹುಟ್ಟಿಸುವ ಹೇಳಿಕೆಗಳಿಗೆ
ಬಾಯಿಗೆ ಬಂದಂತೆ ಹೇಳೋ ಕಾಲ” ಮುಗಿಯಬಹುದು.

 


Post a Comment

Previous Post Next Post